ಶಾಲೆಯನ್ನು ಆರಂಭಿಸುವುದು ಹೇಗೆ

ನಿಮ್ಮ ಊರಿನ ಕ್ರೈಸ್ತಸಭೆಯಲ್ಲಿ ಅಥವಾ ಸಮುದಾಯದಲ್ಲಿ ಥ್ರೂ ದ ಸ್ಕ್ರಿಪ್ಚರ್ಸ್ (TTS) ಶಾಲೆಯನ್ನು ಸ್ಥಾಪಿಸಲು ನೀವು ಆಸಕ್ತಿ ಹೊಂದಿದ್ದೀರಾ? ಈ ನಿಟ್ಟಿನಲ್ಲಿ ಕಾರ್ಯಾರಂಭಿಸಲು ಇಲ್ಲಿ ಕೆಲವು ಐಡಿಯಾಗಳಿವೆ!


ನನ್ನ ಸಭೆಯಲ್ಲಿ ಅಥವಾ ಸಮುದಾಯದಲ್ಲಿ ಸ್ಥಳೀಯ ಥ್ರೂ ದ ಸ್ಕ್ರಿಪ್ಚರ್ಸ್ ಶಾಲೆಯನ್ನು ನಾನು ಏಕೆ ಸ್ಥಾಪಿಸಬೇಕು?

ವಿದ್ಯಾರ್ಥಿಯು ತನ್ನದೇ ಆದ ರೀತಿಯಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುವಂತೆ ಥ್ರೂ ದ ಸ್ಕ್ರಿಪ್ಚರ್ಸ್ ಅನ್ನು ವಿನ್ಯಾಸ ಮಾಡಲಾಗಿದ್ದರೂ ಸಹ, ಹೆಚ್ಚಿನ ವಿದ್ಯಾರ್ಥಿಗಳು ಜೊತೆಯಾಗಿ ಗುಂಪಿನಲ್ಲಿ ಅಧ್ಯಯನ ಮಾಡುವುದರಿಂದ ಪ್ರಯೋಜನ ಪಡೆಯುತ್ತಾರೆ.  ಜೊತೆಗಾರಿಕೆ ಮತ್ತು ಗಾಢಸ್ನೇಹದ ಪ್ರಯೋಜನವಷ್ಟೇ ಅಲ್ಲದೆ, ಗುಂಪು ಅಧ್ಯಯನದಲ್ಲಿನ ಕ್ರಿಯಾಶಕ್ತಿ ಜನರಿಗೆ ಮುನ್ನುಗ್ಗಲು ಪ್ರೇರಣೆ ಮತ್ತು ಪ್ರೋತ್ಸಾಹ ನೀಡುತ್ತದೆ ಮತ್ತು ಇದು ವೈಯಕ್ತಿಕ ಅಧ್ಯಯನದಲ್ಲಿ ಸಾಧ್ಯವಿಲ್ಲ. ಸ್ಥಳೀಯ TTS ಶಾಲೆಯನ್ನು ಸ್ಥಾಪಿಸುವುದರಿಂದ  ಎಲ್ಲಾ ರೀತಿಯ ಬದಲಾವಣೆಗಳಿಗೆ ಕಾರಣವಾಗುವ ಆ ಒಂದು ಮಾನವ ತತ್ತ್ವ ನಿಮಗೆ ದೊರಕುತ್ತದೆ.

ಶಾಲೆಯನ್ನು ಸ್ಥಾಪಿಸುವುದಕ್ಕೆ  ಇರುವ ಬೇರೆ ಬೇರೆ ಸನ್ನಿವೇಶಗಳು ಯಾವುವು?

  • ಸ್ಟ್ಯಾಂಡರ್ಡ್-ಪೇಸ್ ಶಾಲೆ ಯನ್ನು ಸ್ಥಾಪಿಸಿ, ಇದರಲ್ಲಿ ಚರ್ಚಿನ ಸದಸ್ಯರು 50 ದಿನಗಳಿಗೆ ಒಂದು ಕೋರ್ಸಿನ ಪ್ರಕಾರ ಮಾಮೂಲು ವೇಗದಲ್ಲಿ ಇಡಿ ಬೈಬಲನ್ನು ಮುಗಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸೆಮಿಸ್ಟರ್ ಅಧ್ಯಯನಗಳು ಪುಟವನ್ನು ನೋಡಿ.
  • ಫುಲ್-ಟೈಮ್ ಶಾಲೆ ಯನ್ನು ಸ್ಥಾಪಿಸಿ, ಇದರಲ್ಲಿ ವಿದ್ಯಾರ್ಥಿಗಳು ತಮ್ಮ ಎಲ್ಲಾ ಸಮಯವನ್ನು ಎರಡು ಅಥವಾ ಮೂರು ವರ್ಷಗಳ ಅವಧಿಯ ಬೈಬಲ್  ಅಧ್ಯಯನಕ್ಕೆ ಮೀಸಲಿಡುತ್ತಾರೆ. ವಿದ್ಯಾರ್ಥಿಗಳು ಪ್ರತಿ ಕೋರ್ಸಿಗೆ 14 ದಿನಗಳಂತೆ ತೆಗೆದುಕೊಂಡರೆ ಎರಡು ಕಾಲು ವರ್ಷಗಳಷ್ಟು ಕಡಿಮೆ ಸಮಯದಲ್ಲಿಯೇ ಬೈಬಲಿನ ಪ್ರತಿಯೊಂದು ಪುಸ್ತಕವನ್ನು ಪರಿಪೂರ್ಣವಾಗಿ ಅಭ್ಯಸಿಸಲು ಸಾಧ್ಯವಿದೆ. ಇದಕ್ಕೆ ವಿದ್ಯಾರ್ಥಿಗಳ ಸಮರ್ಪಣಾ ಭಾವದ ಆವಶ್ಯಕತೆಯಿದೆ, ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನವೆಚ್ಚವನ್ನು ಭರಿಸುವವರು ಇರಬೇಕಾಗುತ್ತದೆ.
  • ಅಗತ್ಯಕ್ಕೆ-ತಕ್ಕ ಕೋರ್ಸುಗಳನ್ನು ಸಂಯೋಜಿಸುವುದು. ಇಬ್ರಿಯರಿಗೆ ಬರೆದ ಪತ್ರಿಕೆಯ ಮೇಲೆ ಬೈಬಲ್ ತರಗತಿಯನ್ನು ಬೋಧಿಸಲು ಸದಸ್ಯನೊಬ್ಬ ಸಿದ್ಧತೆ ಮಾಡುತ್ತಿದ್ದಾನೆಯೆ? ಅವನನ್ನು ನಮ್ಮ ಇಬ್ರಿಯರಿಗೆ ಬರೆದ ಪತ್ರಿಕೆಯ ಕೋರ್ಸಿಗೆ ಸೇರ್ಪಡೆಗೊಳಿಸಿ, ಬಳಿಕ  ತರಗತಿಯಲ್ಲಿನ ಕೊರತೆಯನ್ನು ತುಂಬಲು ಹೆಚ್ಚು  ಆಳವಾದ ಅಧ್ಯಯನಕ್ಕಾಗಿ ತನ್ನ ತರಗತಿಯ ಸದಸ್ಯರನ್ನು ಸೈನ್ ಅಪ್ ಮಾಡುವಂತೆ ಅವನು ತನ್ನ ಸದಸ್ಯರಿಗೆ ಆಮಂತ್ರಣ ನೀಡಲಿ! ಸಭೆಯು ಹೊಸ ಮುಖಂಡರನ್ನು ನಿಯೋಜಿಸಲಿದೆಯೆ? ಸದಸ್ಯರು ನಮ್ಮ  1 ಮತ್ತು 2 ತಿಮೊಥಿ ಹಾಗೂ ತೀತನಿಗೆ ಬರೆದ ಪತ್ರಿಕೆಯ ಕೋರ್ಸುಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿ! ಹೊಸ ಕ್ರಿಶ್ಚಿಯನ್ನರು ಜೀವಮಾನದುದ್ದಕ್ಕೂ ಬೈಬಲ್ ಅಭ್ಯಸಿಸುವ ಪರಿಪಾಠವನ್ನು ಬೆಳೆಸಿಕೊಳ್ಳಲು ನೆರವಾಗಬೇಕೆಂದಿದ್ದೀರಾ? ಯೇಸುಕ್ರಿಸ್ತನ ಜೀವನ ಮತ್ತು ಆಪೊಸ್ತಲರ ಕೃತ್ಯಗಳು ಎಂಬ ನಮ್ಮ ಕೋರ್ಸುಗಳು ಇವರಿಗೆ ತಕ್ಕನಾದ ಆರಂಭಿಕ ಕೋರ್ಸುಗಳಾಗಿವೆ!
  • ಇದನ್ನು ಮಹಿಳೆಯರ ತರಗತಿಗಳಲ್ಲಿ  ಬಳಸಿ, ಇದರಿಂದ ಅವರು ಬೈಬಲನ್ನು ಹೆಚ್ಚು ಆಳವಾಗಿ ಅಧ್ಯಯನ ಮಾಡಲು ಅನುಕೂಲವಾಗುತ್ತದೆ.
  • ಇದನ್ನು ಬೇಸಗೆಕಾಲದಲ್ಲಿ ಹೈಸ್ಕೂಲ್ ಗುಂಪುಗಳಲ್ಲಿ ಬಳಸಿ, ಇಂಥ ಸಂದರ್ಭಗಳಲ್ಲಿ ನಿರ್ದಿಷ್ಟ ಗ್ರೇಡ್‍ನೊಂದಿಗೆ ಉತ್ತೀರ್ಣರಾಗಲು ಸ್ನೇಹಪೂರ್ಣ ಸ್ಪರ್ಧೆ ಅಥವಾ ಏನಾದರೊಂದು ಪ್ರೇರೇಪಣೆ ಒದಗಿಸಿ. ಈ ವಯಸ್ಸಿನವರಿಗೆ ಸುವಾರ್ತೆಗಳು ಮತ್ತು ಅಪೊಸ್ತಲರ ಕೃತ್ಯಗಳು ಇವುಗಳ ಬಗ್ಗೆ ಇರುವ ಕೋರ್ಸುಗಳನ್ನು ಶಿಫಾರಸು ಮಾಡುತ್ತೇವೆ.
  • ವಯಸ್ಸಿಗೆ ಬಂದ ಮಕ್ಕಳಿರುವ ದಂಪತಿಗಳು ಅಥವಾ ಕುಟುಂಬದವರು ಮಕ್ಕಳ ಜೊತೆಯಲ್ಲಿಯೇ ಕೋರ್ಸುಗಳನ್ನು ತೆಗೆದುಕೊಳ್ಳಬಹುದು ಮತ್ತು ಅಧ್ಯಯನ ಹಾಗೂ ಚರ್ಚೆಗೆ ಆಗಾಗ ಜೊತೆಯಲ್ಲಿಯೇ ಬರಬಹುದು.
  • ಸ್ಥಳೀಯ ಸುವಾರ್ತಾ ಸೇವೆಗೆ ಇದನ್ನು ಸಂಪರ್ಕ ಕೇಂದ್ರವನ್ನಾಗಿ ಬಳಸಿ. ಕೆಲವೊಮ್ಮೆ ಜನರು :”ಅಧ್ಯಯನ ಗುಂಪಿನ” ಭಾಗವಾಗಿರಲು ಇಷ್ಟಪಡುತ್ತಾರೆ, ಇವರು ವೈಯಕ್ತಿಕ ಬೈಬಲ್ ಅಧ್ಯಯನದಲ್ಲಿ ಅಥವಾ ನಿರ್ದಿಷ್ಟ ಆರಾಧನಾ ಸೇವೆಗೆ ಹೋಗಲು ಆಸಕ್ತಿ ಹೊಂದಿರುವುದಿಲ್ಲ. ಈ ರೀತಿ, ಇವರು ಕೋರ್ಸಿನಲ್ಲಿ ಕಲಿಸುವ ಸಂಗತಿಗಳನ್ನು ಕಲಿಯುತ್ತಾರೆ, ಮೀಟಿಂಗ್‍ಗಳ ಸಂದರ್ಭದಲ್ಲಿ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಾರೆ, ಮತ್ತು ಬೇರಯವರೊಂದಿಗೆ ಒಡನಾಟ ಬೆಳೆಸುತ್ತಾರೆ, ಇದು ಮುಂದಿನ ಅಧ್ಯಯನಕ್ಕೆ ದಾರಿಮಾಡಿ ಕೊಡುತ್ತದೆ.  ಬೈಬಲ್‍ನ ಆಳ-ಆಧ್ಯಯನದ ಕೋರ್ಸುಗಳಲ್ಲಿ ಆಸಕ್ತಿ ಹೊಂದಿರುವ ಜನರನ್ನು ನಿಮ್ಮ ಸಮುದಾಯದಿಂದ ಹುಡುಕಲು ಪ್ರಯತ್ನಿಸಿ. ನಿರ್ದಿಷ್ಟ ಚರ್ಚ್ ಬಿಲ್ಡಿಂಗ್‍ಗಳಿಗೆ ಬರಲು ಆತಂಕಪಡುವ ಜನರನ್ನು ಪ್ರೋತ್ಸಾಹಿಸುವುದಕ್ಕಾಗಿ  ನಿಮ್ಮ ಮೀಟಿಂಗ್‍ಗಳನ್ನು ಸಾರ್ವಜನಿಕ  ಸ್ಥಳಗಳಂಥ “ತಟಸ್ಥ” ಲೊಕೇಷನ್‍ಗಳಲ್ಲಿ ಏರ್ಪಡಿಸಿ.
  • ಈ ಕೋರ್ಸುಗಳು ಧರ್ಮ ಪ್ರಚಾರ ಕ್ಷೇತ್ರದಲ್ಲಿ ಬಳಸಲು ಯೋಗ್ಯವಾಗಿದೆ. ಹಲವು ಸ್ಥಳಗಳಲ್ಲಿ ಧಾರ್ಮಿಕ ತರಬೇತಿ ವಿರಳವಾಗಿರುತ್ತದೆ ಅಥವಾ ಲಭ್ಯವಿರುವುದಿಲ್ಲ, ಆದರೆ ಈ ಯೋಜನೆಯು ಜಗತ್ತಿನೆಲ್ಲೆಡೆ 23 ಭಾಷೆಗಳಲ್ಲಿ ಲಭ್ಯವಿದೆ.  ಹೊಸ ಕ್ರೈಸ್ತ ಸಭೆಗಳು ನಮ್ಮ ಕೋರ್ಸುಗಳು ಒದಗಿಸುವ ಆಳವಾದ ಬೈಬಲ್ ಜ್ಞಾನದಿಂದ ಹೆಚ್ಚಿನ ಪ್ರಯೋಜನ ಪಡೆಯಬಲ್ಲವು.  ಸ್ಥಳೀಯ ಶಾಲೆಯನ್ನು ಸ್ಥಾಪಿಸುವುದರಿಂದ ಅವರು ಉತ್ತಮ ಅಧ್ಯಯನ ಹವ್ಯಾಸಗಳನ್ನು ರೂಢಿಸಿಕೊಳ್ಳುವಲ್ಲಿ ಪ್ರೇರೇಪಣೆ ಒದಗಿಸಲು ಸಹಾಯವಾಗುತ್ತದೆ.  ನೀವು ಬೆಂಬಲಿಸುವ ಮಿಷನರಿಗಳು ಈ ಯೋಜನೆಯ ಬಗ್ಗೆ  ತಿಳಿದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ!
  • ಇತರ ಯೋಜನೆಗಳಿಗೆ ಪೂರಕವಾಗಿ ನಮ್ಮ ಕೋರ್ಸುಗಳನ್ನು ಪಠ್ಯಕ್ರಮವಾಗಿ ಸಹ  ಉಪಯೋಗಿಸಬಹುದು. ಉದಾಹರಣೆಗೆ, ವಿದೇಶದಲ್ಲಿನ ಬೋಧಕ ತರಬೇತಿ ಪ್ರೋಗ್ರಾಂಗೆ; ಆ ಪ್ರೋಗ್ರಾಂಗೆ ಸಂಬಂಧಿಸಿದಂತೆ ಒಟ್ಟು ಕಲಿಕಾ ಅನುಭವವನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳು ನಮ್ಮ ಕೆಲವು ಕೋರ್ಸುಗಳನ್ನು ತೆಗೆದುಕೊಳ್ಳಬೇಕಾದ ಆವಶ್ಯಕತೆ ಕಂಡುಬರಬಹುದು.

ನಾನು ಹೇಗೆ ಆರಂಭಿಸುವುದು?

ಥ್ರೂ ದ ಸ್ಕ್ರಿಪ್ಚರ್ಸ್‍ನೊಂದಿಗೆ ಬೈಬಲ್ ಅಧ್ಯಯನ ಮಾಡುವ ಬಗ್ಗೆ ಸಂಘಟಿತ ವ್ಯಕ್ತಿತ್ವ ಹೊಂದಿರುವ, ಪ್ರೇರೇಪಣೆ ಒದಗಿಸಬಲ್ಲ ಹಾಗೂ ಕಾತರದಿಂದಿರುವ  ವ್ಯಕ್ತಿಯೊಬ್ಬನನ್ನು  (ಪ್ರಾಯಃ ನೀವೇ) ಗುಂಪಿನ  “ಡೀನ್” ಆಗಿ ಕಾರ್ಯನಿರ್ವಹಿಸಲು ಆರಿಸಿ.   ಡೀನ್‍ಗೆ ನಾಲ್ಕು ಕೆಲಸಗಳಿರುತ್ತವೆ :

  1. ಗುಂಪಿಗೆ ಜನರನ್ನು ಸೇರ್ಪಡೆಗೊಳಿಸುವುದು.
  2. ಗುಂಪಿನ ಮೀಟಿಂಗ್‍ಗಳನ್ನು ಆಯೋಜಿಸುವುದು.
  3. ತಮ್ಮ ಕೆಲಸದ ಮೇಲೆ ಸದಾ ಗಮನ ಇಡುವಂತೆ ಗುಂಪನ್ನು ಪ್ರೇರೇಪಿಸುವುದು.
  4. ಆವಶ್ಯಕತೆ ಇದ್ದಾಗಲೆಲ್ಲಾ ಗುಂಪಿನ ಸದಸ್ಯರಿಗೆ ಕೋರ್ಸುಗಳಿಗೆ ಸಂಬಂಧಿಸಿದಂತೆ ನೆರವಾಗುವುದು, ಅಂದರೆ ಕಂಪ್ಯೂಟರ್ ಉಪಯೋಗಿಸಲು, ThroughTheScriptures.com ನಲ್ಲಿ ಖಾತೆ ತೆರೆಯಲು, ಅಥವಾ ಆನ್ಲೈನ್ ಟಾಸ್ಕ್ ಗಳಿಗೆ ನೆರವು ನೀಡುವುದು.

ಜನರು ಇದರಲ್ಲಿ ಸೇರಿಕೊಳ್ಳುವಂತೆ ಮಾಡಲು ಅವರಲ್ಲಿ ನಾನು ಹೇಗೆ ಆಸಕ್ತಿ ಹುಟ್ಟಿಸುವುದು?

ಎಲ್ಲೆಲ್ಲೂ ಇದರ ಬಗ್ಗೆ ಹೇಳಿ. ಅಸೆಂಬ್ಲಿಯಲ್ಲಿ ಅನೌನ್ಸ್ ಮಾಡಿ ಮತ್ತು ಚರ್ಚಿನ ಸಮಾಚಾರ ಪತ್ರಗಳಲ್ಲಿ ಇದನ್ನು ಪ್ರಕಟಿಸಿ, ಪವರ್ ಪಾಯಿಂಟ್ ಪ್ರಕಟನೆಗಳಲ್ಲಿ ಮತ್ತು ನಿಮ್ಮ ಚರ್ಚಿನ ವೆಬ್‍ಸೈಟ್‍ಗಳಲ್ಲಿ ಪ್ರಕಟಿಸಿ. ಜನರು ಪಾಲ್ಗೊಳ್ಳುವಂತೆ ಮಾಡುವ ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಆಸಕ್ತಿ ಹೊಂದಿರಬಹುದಾದ ವ್ಯಕ್ತಿಯೊಂದಿಗೆ ವೈಯಕ್ತಿಕವಾಗಿ ಮಾತಾಡುವುದು. ಬೇರೆ ಕ್ರೈಸ್ತಸಭೆಗಳಿಗೂ ತೆರಳಿ ಅಲ್ಲಿ ಇದರ ಬಗ್ಗೆ ಹೇಳುವುದು. ಸಾಧ್ಯವಿದ್ದಲ್ಲಿ, ಪ್ರತಿ ಸಭೆಯಲ್ಲಿ ಇದರ ಕುರಿತು ಪ್ರಚಾರ ಮಾಡಲು ನಿಮಗೆ ನೆರವಾಗಬಲ್ಲ ಯಾರಾದರೊಬ್ಬರನ್ನು ಹುಡುಕುವುದು.  ಚರ್ಚಿಗೆ ಸಂಬಂಧಪಡದಿರುವವರನ್ನು ಆಮಂತ್ರಿಸುವುದನ್ನು ಸಹ ನೀವು ಪರಿಗಣಿಸಬಹುದು. ದೇವರ ಚರ್ಚಿನ ಸದಸ್ಯರಲ್ಲದ ಮತ್ತು ಈ ಬಗೆಯ ಬೈಬಲ್ ಅಧ್ಯಯನದಲ್ಲಿ ಆಸಕ್ತಿ ಇರುವ ಹಲವಾರು ಮಂದಿ ಇದ್ದಾರೆ, ಮತ್ತು ಇವರು ನಿಮ್ಮೊಂದಿಗೆ ನಿರಾತಂಕವಾಗಿ ಬೈಬಲ್ ಅಧ್ಯಯನ ಮಾಡಲು ಇದು ಸರಿಯಾದ ಅವಕಾಶವಾಗಿರುತ್ತದೆ. ನಿರ್ದಿಷ್ಟವಾಗಿ ಬೈಬಲ್ ಅಧ್ಯಯನದಲ್ಲಿ ಆಸಕ್ತಿ ಹೊಂದಿರುವ ಚರ್ಚಿನ ಒಬ್ಬ ಹಿರಿಯರನ್ನು ಕಂಡು ಅವರನ್ನು ಒಂದು ಕೋರ್ಸ್ ಪ್ರಯತ್ನಿಸುವಂತೆ ಆಹ್ವಾನ ನೀಡಿ. ಅವರು ಒಂದು ಕೋರ್ಸನ್ನು ಪೂರ್ಣಗೊಳಿಸಿದ್ದಲ್ಲಿ, ಶಾಲೆಯನ್ನು ಅನುಷ್ಠಾನಕ್ಕೆ ತರುವಲ್ಲಿ  ಬಹುಶಃ ಅವರು ನಿಮ್ಮ ಅತಿ ದೊಡ್ಡ ಬೆಂಬಲ ಶಕ್ತಿಯಾಗಿ ರೂಪುಗೊಳ್ಳಬಹುದು. ಭಾಗವಹಿಸಲು ಬಯಸುವ ಕೆಲವರಿಗೆ ಅಥವಾ ಎಲ್ಲರಿಗೂ ಅವರ ಮೊದಲ ಕೋರ್ಸಿಗೆ ಹಣಪಾವತಿ ಮಾಡಲು ಸಭೆಯು ಬಯಸಬಹುದು. ಆರ್ಥಿಕವಾಗಿ ನಿರ್ಬಲರಾಗಿರುವವರಿಗೆ ಇದರಿಂದ ಒಂದು ಸಂಭಾವ್ಯ ತಡೆ ತೆಗೆದಂತಾಗುತ್ತದೆ. ಪ್ರತಿ ಕೋರ್ಸ್‍ನಲ್ಲಿ ನಿರ್ದಿಷ್ಟ ಗ್ರೇಡ್ ಗಳಿಸಿ ಉತ್ತೀರ್ಣರಾಗುವವರಿಗೆ ಕೋರ್ಸಿನ ಹಣಪಾವತಿ ಮಾಡಲು ಸಹ ಸಭೆ ಬಯಸಬಹುದು, ಇದರಿಂದ ಬೈಬಲ್ ಅಧ್ಯಯನದಲ್ಲಿ ಶ್ರದ್ಧೆ ಉಳಿಸಿಕೊಳ್ಳಲು ಪ್ರೇರಣೆ ಸಿಕ್ಕಂತಾಗುತ್ತದೆ.


 ಆಸಕ್ತಿ ಇರುವ ಜನರನ್ನು ಒಮ್ಮೆ ಕಂಡುಕೊಂಡ ಬಳಿಕ ಮುಂದಿನ ಹೆಜ್ಜೆ ಏನು?

ಗುಂಪು, ಯಾವ TTS  ಕೋರ್ಸುಗಳನ್ನು ಜತೆಯಾಗಿ ತೆಗೆದುಕೊಳ್ಳಲು ಒಪ್ಪಿಕೊಂಡಿದೆ ಎಂಬುದನ್ನು ತಿಳಿದುಕೊಂಡ ಬಳಿಕ, ಜತೆಯಾಗಿ ಅಧ್ಯಯನ ಮಾಡಲು ನಿಮಗೆ ಸಾಧ್ಯವಾಗುವಂತೆ  ಪ್ರತಿಯೊಬ್ಬರೂ ಕೋರ್ಸನ್ನು ಶುರುಮಾಡಲು ಒಂದು ನಿರ್ದಿಷ್ಟ ದಿನವನ್ನು ನಿಗದಿ ಮಾಡಿ. ಸೈನ್ ಅಪ್ ಮಾಡುವುದು ಹೇಗೆ ಎಂಬುದನ್ನು ವಿವರಿಸಲು ಮತ್ತು ಯಾರಿಗಾದರೂ ಸಮಸ್ಯೆಯಿದ್ದಲ್ಲಿ ನೆರವಾಗುವುದನ್ನು ಖಚಿತಪಡಿಸಿಕೊಳ್ಳಿ. ಸಾಪ್ತಾಹಿಕ ಮೀಟಿಂಗನ್ನು ಆಯೋಜಿಸಿ. ಕೆಲವೊಂದು ಗುಂಪುಗಳು ಚರ್ಚಿನ ಆರಾಧನಾ ಸಮಯದ ಒಂದು ಗಂಟೆ ಮೊದಲು ಭೇಟಿಯಾಗಲು ನಿಗದಿ ಮಾಡಿಕೊಳ್ಳುತ್ತವೆ.  ಇನ್ನು ಕೆಲವರು ವಾರಾಂತ್ಯದ ದಿನಗಳನ್ನು ಹೊರತುಪಡಿಸಿ ವಾರದ ಉಳಿದ ದಿನಗಳ ಯಾವುದೇ ರಾತ್ರಿಯನ್ನು ಅಥವಾ ಬೇರಾವುದೇ ಸಮಯವನ್ನು ಆರಿಸಿಕೊಳ್ಳುತ್ತಾರೆ. ಪಾಲ್ಗೊಳ್ಳಲು ಬಯಸುವವರಿಗೆ ಅನುಕೂಲವೆಂದೆನಿಸುವ ಸಮಯವನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಇದೇ ಸಂಗತಿ ಲೊಕೇಷನ್‍ಗೂ ಅನ್ವಯಿಸುತ್ತದೆ: ಕೆಲವರು ಚರ್ಚ್ ಬಿಲ್ಡಿಂಗ್ ನಲ್ಲಿ, ಇನ್ನು ಕೆಲವರು ಸದಸ್ಯರ ಮನೆಗಳಲ್ಲಿ ಅಥವಾ ಬೇರೆ ಸ್ಥಳಗಳಲ್ಲಿ ಭೇಟಿಯಾಗಲು ಬಯಸುತ್ತಾರೆ.


ಸಾಪ್ತಾಹಿಕ ಮೀಟಿಂಗ್‍ಗಳಲ್ಲಿ ನಾವು ಏನು ಮಾಡುತ್ತೇವೆ?

ನಮ್ಮ ಸಮಗ್ರ ಗುರಿಯೆಂದರೆ ಕೋರ್ಸುಗಳ ಅಧ್ಯಯನಕ್ಕೆ ಬೆಂಬಲ ಮತ್ತು ಪ್ರೋತ್ಸಾಹ ನೀಡುವುದು. ಪರೀಕ್ಷೆಗಳಿಗೆ ತಯಾರಿ ನಡೆಸಲು ನೀವು ಅಧ್ಯಯನ ಗೈಡ್‍ಗಳನ್ನು ಅಭ್ಯಸಿಸಬೇಕು, ಗ್ರಹಿಸಲು ಕಷ್ಟವಾದ ವಿಷಯಗಳನ್ನು ತಿಳಿದುಕೊಳ್ಳಲು ಒಬ್ಬರಿಗೊಬ್ಬರು ನೆರವಾಗಬೇಕು. ಹೆಚ್ಚಿನ ಗುಂಪುಗಳು ಈ ಸಮಯವನ್ನು ದೈವಿಕ ಸಂದೇಶ ಸೇರಿಸಲು ಉಪಯೋಗಿಸುತ್ತಾರೆ, ಈ ಸಂದೇಶವನ್ನು ಆ ವಾರದಲ್ಲಿ ಅವರು ಅಭ್ಯಸಿಸಿದ ಕೋರ್ಸಿನ ಯಾವುದಾದರೊಂದು ವಿಷಯದಿಂದ ಆರಿಸಿಕೊಳ್ಳಲಾಗುತ್ತದೆ. ಪ್ರತಿ ವಾರದಲ್ಲಿ ಸರದಿಯಂತೆ  ಬೇರೆ ಬೇರೆ ಸದಸ್ಯರು ದೈವಿಕ ಸಂದೇಶವನ್ನು ಪ್ರಸ್ತುತಪಡಿಸಬಹುದು. ನಿಮ್ಮ ಸಾಪ್ತಾಹಿಕ ಮೀಟಿಂಗ್ ಆಯೋಜನೆಯ ಪ್ರಮುಖ ಉದ್ದೇಶವೆಂದರೆ ಜೊತೆಗಾರಿಕೆ ಮತ್ತು ನಿಕಟ ಸ್ನೇಹವನ್ನು ಪ್ರೋತ್ಸಾಹಿಸುವುದು, ಹಾಗಾಗಿ ನೀವು ಆಗಾಗ ಇತರ ಚಟುವಟಿಕೆಗಳನ್ನು ಸೇರಿಸಲು ಬಯಸಬಹುದು, ಅವೆಂದರೆ ಕಾಫಿ, ತಿಂಡಿ, ಅಥವಾ ಕೋರ್ಸ್ ಪೂರ್ಣಗೊಳಿಸಿರುವುದನ್ನು ಆಚರಿಸಲು ಭೋಜನದ ಆಯೋಜನೆ. ಈ ಹೆಚ್ಚುವರಿ ಸಂಗತಿಗಳ ಆಯೋಜನೆಯಲ್ಲಿ ನಿಮ್ಮ ಮೀಟಿಂಗ್‍ನ ಪ್ರಾಥಮಿಕ ಉದ್ದೇಶವನ್ನು ಕಡೆಗಣಿಸಬೇಡಿ ಅಥವಾ ಈ ಹೆಚ್ಚುವರಿ ಸಂಗತಿಗಳಿಗೆ ಬೇಡಿಕೆ ಹೆಚ್ಚಾಗಿ ಜನರು ಅಧ್ಯಯನ ಬಿಟ್ಟುಹೋಗುವಲ್ಲಿಗೆ ತಲುಪದಂತೆ ನೋಡಿಕೊಳ್ಳಿ.


ಈ ಐಡಿಯಾಗಳು ಕೇವಲ ಸಲಹೆಗಳಾಗಿವೆ. ಈ ಯೋಜನೆಯ ಸೊಬಗು ಏನೆಂದರೆ ನಾವು ಮೂಲ ಸಾಮಗ್ರಿಗಳನ್ನು ಒದಗಿಸುತ್ತೇವೆ ಮತ್ತು ನೀವು ನಿಮ್ಮ ಅಗತ್ಯಗಳಿಗೆ ತಕ್ಕಂತೆ ಸ್ಥಳೀಯ ಶಾಲೆಯನ್ನು ರೂಪಿಸಬಹುದು. ನಮ್ಮ ಅಥವಾ ನಿಮ್ಮ ಕೆಲವೊಂದು ಐಡಿಯಾಗಳಲ್ಲಿ ಯಾವುದೇ ಒಂದು ನಿರ್ದಿಷ್ಟವಾಗಿ ಚೆನ್ನಾಗಿ ಕೆಲಸ ಮಾಡಿದೆಯೆ? ಅದರ ಬಗ್ಗೆ ಕೇಳಲು ನಾವು ಉತ್ಸುಕರಾಗಿದ್ದೇವೆ! ನಮ್ಮ ಅಭಿಪ್ರಾಯ ಪುಟದ ಮೂಲಕ ದಯವಿಟ್ಟು ನಮಗೆ ತಿಳಿಸಿ.