“ನೀನು ನನ್ನಿಂದ ಅನೇಕ ಸಾಕ್ಷಿಗಳ ಮುಂದೆ
ಕೇಳಿದ ಉಪದೇಶವನ್ನು ಇತರರಿಗೆ ಬೋಧಿಸ ಶಕ್ತರಾದ
ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು ” (2 ತಿಮೊಥಿ 2:2).
ಥ್ರೂ ದ ಸ್ಕ್ರಿಪ್ಚರ್ಸ್ ಇದು, ಜಗತ್ತಿನೆಲ್ಲೆಡೆ ಸುವಾರ್ತೆ ಸಾರುವುದಕ್ಕೆ ಸಮರ್ಪಿಸಿಕೊಂಡಿರುವ ಆರ್ಕನ್ಸಾಸ್, ಸೆಯಾರ್ಕಿಯಲ್ಲಿರುವ ಬಹುಮುಖಿ, ಲಾಭಾಪೇಕ್ಷೆಯಿಲ್ಲದ ಟ್ರೂತ್ ಫಾರ್ ಟುಡೇ ಇದರ ಕಾರ್ಯಯೋಜನೆಯಾಗಿದೆ. ಹಾರ್ಡಿಂಗ್ ವಿಶ್ವವಿದ್ಯಾನಿಲಯದಲ್ಲಿ ಬೈಬಲ್ ಮತ್ತು ಬೋಧನಾ ಕೋರ್ಸುಗಳ ಪ್ರೊಫೆಸರ್ ಆಗಿರುವ ಎಡ್ಡಿ ಕ್ಲೊಯೆರ್ ಇವರು ಇದರ ನಿರ್ದೇಶಕರಾಗಿದ್ದು, ದೇವರ ಪವಿತ್ರ ವಾಕ್ಯಗಳನ್ನು ನಿಷ್ಠೆಯಿಂದ ಕಲಿಸಲು TFT ಶ್ರಮಿಸುತ್ತಿದೆ.
ಪ್ರಪಂಚದೆಲ್ಲೆಡೆ ವ್ಯಾಪಿಸಿರುವ ಕ್ರೈಸ್ತಸಭೆಗಳ ಉಳಿವು ಮತ್ತು ಆತ್ಮಿಕ ಬೆಳವಣಿಗೆಯು ಉತ್ತಮ ಗುಣಮಟ್ಟದ ಬೈಬಲ್ ಅಧ್ಯಯನ ಸಾಮಗ್ರಿಗಳ ಲಭ್ಯತೆಯನ್ನು ಅವಲಂಬಿಸಿರುತ್ತದೆ ಎಂಬುದು ಅನುಭವಿ ಮಿಶನರಿಗಳ ಅಭಿಮತ. ಈ ಆವಶ್ಯಕತೆಗೆ ಇಂಬು ಕೊಡಲು ಟ್ರೂತ್ ಫಾರ್ ಟುಡೇ ಸಿದ್ಧವಾಗಿದೆ.
ಕಲಿಕಾ ಸಾಮಗ್ರಿಗಳು ಹೊಸ ಒಡಂಬಡಿಕೆಯ ಕ್ರೈಸ್ತಮತದ ನಿತ್ಯಜೀವದೊಂದಿಗೆ ಸಾಮರಸ್ಯ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟ ಪಠ್ಯ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ನಿರ್ದಿಷ್ಟವಾಗಿ, (a) ಈ ಪಠ್ಯ ಸಾಮಗ್ರಿಗಳು ಹೊಸ ಒಡಂಬಡಿಕೆಯ ಚರ್ಚ್‍ಗೆ ಗೌರವ ಮತ್ತು ಪ್ರೋತ್ಸಾಹ ನೀಡಬೇಕು ಮತ್ತು ಯಾವುದೇ ವಿಧದಲ್ಲಿ ಡಿನಾಮಿನ್ಯಾಷನಲಿಸಂ; ಅಂದರೆ, ಮನುಷ್ಯ ನಿರ್ಮಿತ ಧಾರ್ಮಿಕ ಗುಂಪುಗಳಿಗೆ ಅನುಮೋದನೆ ನೀಡಬಾರದು ಅಥವಾ ಅಂಥ ನಂಬಿಕೆಗಳಿಗೆ ಪ್ರೋತ್ಸಾಹ ನೀಡಬಾರದು; (b) ಈ ಪಠ್ಯ ಸಾಮಗ್ರಿಗಳು, ಬೈಬಲ್ ಬೋಧನೆಗಳ ಮೂಲರೂಪ, ಸುರಕ್ಷಿತ ಹಾಗೂ ಪ್ರಾಕ್ಟಿಕಲ್ ವಿಧಾನದ ನಿರೂಪಣೆಗೆ ಒತ್ತು ನೀಡಬೇಕು; (c) ಈ ಪಠ್ಯ ಸಾಮಗ್ರಿಗಳು ನಂಬಿಕೆ, ಪಶ್ಚಾತ್ತಾಪ, ಮತ್ತು ಯೇಸುಕ್ರಿಸ್ತರ ಪಾಪ ಕ್ಷಮಾಪಣೆಯ ಮೂಲಕ ರಕ್ಷಣೆ ಪಡೆಯುವುದು ಮತ್ತು ದೇವರ ವಾಕ್ಯಗಳು ಹೇಳಿರುವಂತೆ ಪಾಪಗಳ ಕ್ಷಮಾಪಣೆಗಾಗಿ ದೀಕ್ಷಾಸ್ನಾನ ಪಡೆದುಕೊಳ್ಳುವುದು ಇವುಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡಬೇಕು; (d) ಈ ಪಠ್ಯ ಸಾಮಗ್ರಿಗಳು ಹೊಸ ಒಡಂಬಡಿಕೆಯ ವಿಧಾನಕ್ಕನುಗುಣವಾಗಿ ದೇವರ ಆರಾಧನೆಯನ್ನು ಪ್ರೋತ್ಸಾಹಿಸಬೇಕು ಮತ್ತು ಮನುಷ್ಯ ನಿರ್ಮಿತ ಯಾವುದೇ ದೇವರುಗಳಿಗೆ ಅನುಮೋದನೆ ನೀಡಬಾರದು; (e) ಈ ಪಠ್ಯ ಸಾಮಗ್ರಿಗಳು ಅಮೇರಿಕಾದ ಕ್ರೈಸ್ತಧರ್ಮವನ್ನು ಸಮರ್ಥಿಸಬಾರದು ಬದಲಿಗೆ ಯಾವುದೇ ಸಂಸ್ಕೃತಿಗೆ ಸೂಕ್ತವಾಗಿ ಒಪ್ಪುವ ಶಾಶ್ವತ ತತ್ತ್ವಗಳನ್ನಾಧರಿಸಿದ ಹೊಸ ಒಡಂಬಡಿಕೆಯ ವಿಶ್ವ ಕ್ರೈಸ್ತಧರ್ಮವನ್ನು ಸಮರ್ಥಿಸಬೇಕು.