ಎಫೆಸದವರಿಗೆ ಮತ್ತು ಫಿಲಿಪ್ಪಿಯವರಿಗೆ
ಕ್ರಿಸ್ತನಲ್ಲಿ ಕ್ರೈಸ್ತರು ಹೊಂದುವ ಮಹತ್ತರವಾದ ಆತ್ಮೀಕ ಆಶೀರ್ವಾದಗಳನ್ನು ಪೌಲನು ಬರೆದ ಪತ್ರಿಕೆ ವಿವರಿಸುತ್ತದೆ. ಅದು ನಮ್ಮ ಕರ್ತನು ತಂದೆಯ ಬಲಗಡೆಗೆ ಹೆಚ್ಛಲ್ಪಟ್ಟಿದ್ದಾನೆಂದು, ಆತನ ಸಭೆಗೆ ಶಿರಸ್ಸಾಗಿ ಪಾಲಿಸುತ್ತಿದ್ದಾನೆ ಎಂಬುದನ್ನು ಒತ್ತಿ ಹೇಳುತ್ತದೆ. ಈ ಒಂದೇ ಶರೀರ, ವಿವಿಧ ಅಂಗಗಳನ್ನು ಹೊಂದಿಕೊಂಡು ವಿಶ್ವಾಸದಲ್ಲಿ ಐಕ್ಯತೆಯನ್ನು ಮತ್ತು ದೇವರನ್ನು ಅನುಸರಿಸುವಂತೆ ಜೀವನ ಶೈಲಿಯನ್ನು ಹೊಂದಲು ಕರೆಯಲ್ಪಟ್ಟೆವು. ದೇವರು ದಯಾಪಾಲಿಸು ಸರ್ವಾಯುಧಗಳು ಮತ್ತು ಜಾಗೃತಿ ಬೇಕಾಗಿರುವಂತ ಆತ್ಮೀಕ ಯುದ್ಧದಲ್ಲಿ ಇದ್ದೇವೆಂದು ಈ ಪತ್ರಿಕೆಯು ಜ್ಞಾಪಿಸುತ್ತದೆ.
ಸುವಾರ್ತೆ ಸಾರುವದರಲ್ಲಿ ಪಾಲುಗಾರರಾಗಿರುವ ಕ್ರೈಸ್ತರನ್ನು ಫಿಲಿಪ್ಪಿಯದವರಿಗೆ ಬರೆದ ಪತ್ರಿಕೆ ಶ್ಲಾಘಿಸುತ್ತದೆ. ಪರಲೋಕದ ನಾಗರೀಕರಾಗಿ, ಒಂದೇ ಆತ್ಮದಲ್ಲಿ ಐಕ್ಯರಾಗಿ ಜೀವಿಸಬೇಕೆಂದು ಪೌಲನು ವಿಶ್ವಾಸಿಗಳಿಗೆ ಸವಾಲನ್ನು ಹಾಕುತ್ತಾನೆ. ಈ ಐಕ್ಯತೆ ಭೂಮಿಯ ಮೇಲೆ ಮತ್ತು ತನ್ನ ನರವತಾರದಲ್ಲಿ ವಿನಯ ಸ್ವಭಾವವನ್ನು ಪ್ರತಿರೂಪಿಸಿದ ಕ್ರಿಸ್ತನನ್ನು ಅನುಸರಿಸುವದರ ಮೂಲಕ ಬರುತ್ತದೆ. ಕ್ರಿಸ್ತನ ಹಾಗೆ ನಾವು ಸಹ ಉನ್ನತಕ್ಕೇರಿಸಲ್ಪಡುವ ಮುನ್ನ ಶ್ರಮೆ ಭಾದೆಗಳನ್ನು ಅನುಭವಿಸಬೇಕು.
ಜಾಯ್ ಲಾಕ್ ಹಾರ್ಟ್ ಮತ್ತು ಡೇವಿಡ್ ಎಲ್. ರೋಪರ್ ಅನೇಕ ವರ್ಷಗಳ ಅಧ್ಯಯನ ಮತ್ತು ಸೇವೆಯ ಅನುಭವದಿಂದ ಓದುಗರನ್ನು ಈ ಪತ್ರಿಕೆಗಳನ್ನು ಸವಾಲಿನಿಂದ ಓದಲು ಆಹ್ವಾನಿಸುತ್ತಾರೆ. ಈ ಕೋರ್ಸ ನಿಂದ ದೇವರ ವಾಕ್ಯವನ್ನು ಓದುವ ಎಲ್ಲಾ ವಿದ್ಯಾರ್ಥಿಗಳು ಲಾಭವನ್ನು ಪಡೆಯುತ್ತಾರೆ.