ಪ್ರಕಟಣೆ 1—11
ಪ್ರಕಟನೆ ಪುಸ್ತಕವು ಕಣ್ಣಿಗೆ ಕಟ್ಟುವಂಥ ಚಿತ್ರಣ ಹಾಗೂ ಅತ್ಯಂಥ ರೂಪಕತೆಯುಳ್ಳ ಸಾಂಕೇತಗಳನ್ನೊಳಗೊಂಡಿದ್ದು ನುರಿತ ಕ್ರೈಸ್ತ ವೇದಪಂಡಿತರಿಗೆ ವ್ಯಾಖ್ಯಾನದ ಸವಾಲನ್ನು ಮುಂದಿಡುತ್ತದೆ. ಹೇಗೂ, ಡೇವಿಡ್ ಎಲ್. ರೋಪರ್ ಪ್ರಕಟನೆ ಪುಸ್ತಕದ ಕುರಿತಾದ ಎರಡು ಸಂಪುಟಗಳುಳ್ಳಂಥ ಅತ್ಯಂಥ ಸಹಾಯಕಾರಿ ಹಾಗೂ ಸುಲಭವಾಗಿ ಅರ್ಥಮಾಡಿಕೊಳ್ಳಲಾಗುವಂಥ ಅಧ್ಯಯನಗಳನ್ನು ಒದಗಿಸುತ್ತಾನೆ. ಈ ಕೋರ್ಸ್.ನಲ್ಲಿ, ವಾಚಕನನ್ನು ಕ್ರಿಸ್ತನ ಜಯದಲ್ಲಿ ಸಂಭ್ರಮಿಸುವಂತೆ ನಡಿಸುವಂತಹ ರೋಮಾಂಷಕಾರಿ ಅಧ್ಯಯನದಲ್ಲಿ 1 ರಿಂದ 11 ಅಧ್ಯಾಯಗಳನ್ನು ಪೂರ್ತಿಗೊಳಿಸಿರುತ್ತಾನೆ.
ರೋಪರ್.ನು ಒಂದು ಅತ್ಯುತ್ತಮವಾದ ಪರಿಚಯಭಾಗದೊಂದಿಗೆ ಆರಂಭಿಸುತ್ತಾನೆ, ಅದು ಹಿನ್ನಲೆಯ ವಿಷಯಗಳನ್ನು, ಅರ್ಥನಿರೂಪಣೆಯ ವಿವಿಧ ವಿಧಾನಗಳನ್ನು, ಮತ್ತು ಸಂಕೇತಗಳನ್ನು ವಿವರಿಸುವದಾಗಿದೆ. ಆತನು ತನ್ನ ವ್ಯಾಖ್ಯೆಗಳಲ್ಲಿ, ಪ್ರಥಮ ಶತಮಾನದಲ್ಲಿ ಹಿಂಸೆಗೊಳಗಾಗಿದ್ದ ಕ್ರೈಸ್ತರ ಐತಿಹಾಸಿಕ ಪರಿಸ್ಥಿತಿಗಳ ಕುರಿತು ಆಲೋಚನೆ ಮಾಡುವಂತೆ ತನ್ನ ವಾಚಕರಿಗ ಕರೆ ಕೊಡುವವನಾಗಿ ಅವರಿಗೆ ಪುಸ್ತಕದಿಂದ ದೊರೆತಿರಬಹುದಾದ ಆತ್ಮೀಕ ಪ್ರೋತ್ಸಾಹದ ಕುರಿತು ಒತ್ತಿ ಹೇಳುತ್ತಾನೆ. ಅಲ್ಲದೆ ರೋಪರ್.ನು ಇಂದು ಪ್ರಕಟನೆ ಪುಸ್ತಕವನ್ನ ಸುತ್ತುವರೆದಿರುವ ಕೆಲವೊಂದು ಲಂಗುಲಗಾಮಿಲ್ಲದ ಊಹೆಗಳನ್ನು ಖಂಡಿಸುತ್ತಾನೆ.