ಅಪೊಸ್ತಲರ ಕೃತ್ಯಗಳು 15—28
ಅಪೊಸ್ತಲರ ಕೃತ್ಯಗಳ ಪುಸ್ತಕವು ಆದಿ ಕ್ರೈಸ್ತತ್ವದ ಮೊದಲ ಮೂವತ್ತು ವರ್ಷಗಳ ವಿವರಗಳನ್ನು ನೀಡುತ್ತದೆ, ಅದರ ಪ್ರೇರಿತ ಮಾರ್ಗದರ್ಶನದೊಂದಿಗೆ, ಇಂದು ದೇವರ ಸಭೆಗೆ ಆತನ ಚಿತ್ತವೇನೆಂಬದನ್ನು ತಿಳಿಸುತ್ತದೆ. ಅಪೊಸ್ತಲರ ಕೃತ್ಯಗಳು 1-14ರಲ್ಲಿ, ಡೇವಿಡ್ ಎಲ್. ರೋಪರ್ ನಮ್ಮನ್ನು ಪ್ರಥಮ ಶತಮಾನದ ಸಭೆಯ ಇತಿಹಾಸದ ಮೂಲಕ ಕರೆದೊಯ್ಯುತ್ತಾನೆ. ನಮ್ಮ ರಕ್ಷಕನ ಪರಲೋಕಾರೋಹಣದಿಂದ ಆರಂಭಗೊಂಡು ಪೌಲನ ಪ್ರಥಮ ಸುವಾರ್ತಾಪ್ರಯಾಣದೊಂದಿಗೆ ಮುಕ್ತಾಯ ಗೊಳ್ಳುತ್ತದೆ. ಮುಂದಿನ ಅಧ್ಯಯನದ, ಅಪೊಸ್ತಲರ ಕೃತ್ಯಗಳು 15-28 ರಲ್ಲಿ, ಆತನು ಯೆರೂಸಲೇಮಿನಲ್ಲಿ ನಡೆದ ಸಮಾಲೋಚನಾ ಸಭೆಯಿಂದ ಪ್ರಾರಂಭಿಸಿ ವಾಚಕರನ್ನು ಪೌಲನು ರೋಮಾಪುರಕ್ಕೆ ಮಾಡುವ ಸೇವೆಯ ತನಕ ಕರೆದೊಯ್ಯುತ್ತಾನೆ.