ಆದಿಕಾಂಡ 1—22
ಆರಂಭಗಳ ಕುರಿತಾದ ದೇವರ ಈ ಪುಸ್ತಕರ ವಿವರವಾದ ಅಧ್ಯಯನದಲ್ಲಿ, ವಿಲಿಯಮ್ ಡಬ್ಲೂ. ಗ್ರಾಶಾಮ್ (William W. Grasham) ಸೃಷ್ಟಿಯ ಕಥನ, ಅಬ್ರಹಾಮ ಮತ್ತು ಆತನ ಸಂತತಿಯವರನ್ನು ದೇವರಾದುಕೊಂಡ ಜನರನ್ನಾಗಿ ಆರಿಸಿಕೊಳ್ಳುವಿಕೆ, ಮತ್ತು ಪಾಪದ ನಿತ್ಯವಾದ ಪರಿಣಾಮಗಳಿಂದ ಮಾನವರನ್ನು ರಕ್ಷಿಸುವದಕ್ಕಾಗಿ ದೇವರು ಮಾಡಿದ ಆರಂಭಿಕ ಯೋಜನೆ ಇವುಗಳ ಕುರಿತು ಪರಿಶೀಲನೆ ನಡಿಸುತ್ತಾರೆ. ವ್ಯಕ್ತಿಪರರ ಜೀವಿತಗಳ ಕಥನಗಳನ್ನು ಕೊಡುವದರಲ್ಲಿ, ಆದಿಕಾಂಡವು ನಮ್ಮ ಮೂಲವು ಯಾವುದು, ಮತ್ತು ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಮಾನವ ಜನಾಂಗದ ಮಹಾ ತತ್ವಜ್ಞಾನಿಕವಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ.
ಪ್ರಾಚೀನ ಜಗತ್ತಿನ ನಿವಾಸಿಗಳ ಇತಿಹಾಸದಲ್ಲಿ ಮುಖ್ಯವಾದ ವೈಶಿಷ್ಟ್ಯತೆಯೆಂದರೆ ದೇವರ ಸಂಗಡ ಅವರಿಗಿದ್ದ ಸಂಬಂಧವೇ. ಆತನು ತನ್ನ ಜನರ ಸಂಗಡ ಮಾಡಿದ ವ್ಯವಹಾರಗಳು ಆತನ ದೈವಿಕ ಸ್ವಭಾವವನ್ನು ಬಯಲುಗೊಳಿಸುತ್ತದೆ. ಆತನ ನೀತಿ ಮತ್ತು ರೌದ್ರತೆ, ಒದಗಿಸುವಿಕೆ ಮತ್ತು ದಂಡನೆ, ಮತ್ತು ಪ್ರತಿಯೊಂದು ವಾಗ್ದಾನಗಳಿಗೆ ಆತನ ನಂಬಿಗಸ್ತನಾಗಿರುವಿಕೆ. ಇಂದು ಪ್ರತಿಯೊಬ್ಬ ವ್ಯಕ್ತಿಯ ಜೀವಿತದಲ್ಲಿ ಕೇಂದ್ರಿಯ ಪಾತ್ರವನ್ನು ವಹಿಸಬೇಕಾದ ಏಕೈಕ ಸತ್ಯ ದೇವರು ಈತನಾಗಿರುವನು. ಸಹೋದರ ಗ್ರಾಶಾಮ್ ಜೊತೆಯಾಗಿ ಕಥನಗಳು ಮುಖಾಂತರವಾಗಿ ಈ ದೇವರನ್ನು ಜಾಗರೂಕತೆಯಿಂದ ದೃಷ್ಟಿಸುವ ಯಾರಾದರೂ ಸರಿಯೇ ದೇವರನ್ನು ಇನ್ನೂ ಉತ್ತಮವಾಗಿ ಅರಿತುಕೊಳ್ಳುವರು. ಬೋಧನೆ ಮತ್ತು ಉಪದೇಶ ಮಾಡುವವರಿಗಾದರೋ, ಅನ್ವಯಿಸುವಿಕೆಯ ಭಾಗವು ಅವರ ಪಾಠಗಳನ್ನು ವಿಸ್ತರಿಸುವಂಥ ವಿವಿಧ ದೃಷ್ಟಾಂತಗಳನ್ನು ಮತ್ತು ಪ್ರಸಂಗಗಳನ್ನು ಒಳಗೊಂಡಿರುತ್ತದೆ.