ಆದಿಕಾಂಡ 23—50

ಈ ಕೋರ್ಸಿನೊಳಗೆ, ವಿಲಿಯಂ ಡಬ್ಲ್ಯೂ. ಗ್ರಾಶಮ್ನು (William W. Grasham) ಆದಿಕಾಂಡದ ಸಮಗ್ರವಾದ ಅಧ್ಯಯನವನ್ನು ಪೂರ್ತಿಗೊಳಿಸುತ್ತಾರೆ. ಈ ಆರಂಭಗಳ ಪುಸ್ತಕದ ಕಡೆಯ ಅರ್ಧ ಭಾಗದ ಮುಖಾಂತರವಾಗಿ ಸಾಗಿ, ಆತನು ಅಬ್ರಹಾಮನ ಜೀವಿತದ ಅಂತ್ಯದಿಂದ ಮುಂದಕ್ಕೆ ಇಸಾಕ ಮತ್ತು ಯಾಕೋಬರ ಕಥನಗಳ ಕಡೆಗೆ ಹೋಗುತ್ತಾನೆ. ತರುವಾಯ ಯೋಸೇಫನ ಜೀವಿತದ ಕುರಿತು ಒಂದೊಂದು ವಚನದ ಒಂದು ಅತ್ಯುತ್ತಮವಾದ ಅಧ್ಯಯನವನ್ನು ತಿಳಿಸಿ ಕೊಡುತ್ತಾನೆ, ಅದು ದೇವರು ಯಾವಾಗಲೂ ತೆರೆಮರೆಯಲ್ಲಿದ್ದು, ತನ್ನ ದೈವಾನುಗ್ರಹದ ಯೋಜನೆಗಳು ಮತ್ತು ಉದ್ದೇಶಗಳಿಗೆ ಅನುಗುಣವಾಗಿ ಅನುಕೂಲ ಮಾಡುವವನಾಗಿದ್ದಾನೆ ಎಂಬುದರ ನಿದರ್ಶನವಾಗಿರುತ್ತದೆ.

ದೇವರ ಕರೆಯಲ್ಪಟ್ಟಿರುವ ಜನರ ಕುರಿತಾದ ಈ ಇತಿಹಾಸದಲ್ಲಿನ ಮುಖ್ಯವಾದ ವೈಶಿಷ್ಟ್ಯವು ಅವನೊಂದಿಗೆ ಅವರಿಗಿರುವ ಸಂಬಂಧವೇ. ದೇವರು ತನ್ನ ಜನರ ಸಂಗಡ ನಡೆದುಕೊಂಡ ರೀತಿಗಳು ಆತನ ದೈವಿಕ ಸ್ವಭಾವವನ್ನು ತೋರಿಸಿ ಕೊಡುತ್ತದೆ: ಆತನ ನೀತಿ ಮತ್ತು ರೌದ್ರ, ಏರ್ಪಾಡು ಮತ್ತು ದಂಡನೆ, ಮತ್ತು ಎಲ್ಲಾ ವಾಗ್ದಾನದಲ್ಲಿ ನಂಬಿಗಸ್ತಿಕೆ. ಇಂದು ಪ್ರತಿಯೊಬ್ಬ ವ್ಯಕ್ತಿಯ ಜೀವಿತದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಲು ಯೋಗ್ಯನಾದ ಏಕೈಕ ಸತ್ಯ ದೇವರು ಈತನಾಗಿರುವನು. ಈ ಕಥನಗಳ ಮುಖಾಂತರವಾಗಿ ಸಹೋದರ ಗ್ರಾಶಮ್ ಜೊತೆಯಲ್ಲಿ ಹತ್ತಿರದಿಂದ ಆತನನ್ನು ನೋಡುವ ಯಾರೇ ಆಗಲಿ ದೇವರನ್ನು ಇನ್ನಷ್ಟು ಚೆನ್ನಾಗಿ ಅರಿತುಕೊಳ್ಳುವರು. ಬೋಧಿಸುವವರಿಗೆ ಮತ್ತು ಉಪದೇಶಿಸುವವರಿಗೆ ಪಾಠಗಳನ್ನು ಇನ್ನಷ್ಟು ವಿಸ್ತರಿಸುವಂತಾಗುವ ಹಾಗೆ ಅನ್ವಯಿಸುವಿಕೆಗಳು ವಿವಿಧ ದೃಷ್ಟಾಂತಗಳನ್ನು ಮತ್ತು ಪ್ರಸಂಗಗಳನ್ನು ಒಳಗೊಂಡಿವೆ.


ಕೋರ್ಸಿನಲ್ಲಿ ಏನೇನಿರುತ್ತದೆ?

ಈ 50-ದಿನಗಳ ಕೋರ್ಸಿನಲ್ಲಿ ನಿಮಗೆ ಬೇಕಾದುದೆಲ್ಲವೂ ಇರುತ್ತದೆ. ಈ ಕೋರ್ಸನ್ನು ಮುಗಿಸಲು ನಿಮಗೆ ಹೆಚ್ಚಿನ ಸಮಯದ ಆವಶ್ಯಕತೆಯಿದ್ದಲ್ಲಿ, ನಿಮ್ಮ ಕೋರ್ಸನ್ನು ಹೆಚ್ಚುವರಿ 30 ದಿನಗಳಿಗಾಗಿ ವಿಸ್ತರಿಸಬಹುದು. ಕೆಲವು ಮಾದರಿ ಪಠ್ಯ ಸಾಮಗ್ರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್ ಪುಸ್ತಕ

ಆದಿಕಾಂಡ 23—50 ರವರು ಬರೆದಿರುವ ವಿಲಿಯಮ್ ಡಬ್ಲೂ. ಗ್ರಾಶಾಮ್ (William W. Grasham) ಪುಸ್ತಕದ ಡಿಜಿಟಲ್ ಪ್ರತಿಯು ಕೋರ್ಸಿನ ನಿಮ್ಮ ಅಧ್ಯಾಪಕರಾಗಿರುತ್ತಾರೆ, ಮತ್ತು ಕೋರ್ಸ್ ಮುಗಿದ ಬಳಿಕವೂ ಅದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು.

ಐದು ಅಧ್ಯಯನ ಗೈಡ್ ಗಳು

ನೀವು ಓದುವಾಗ ಸ್ಥೂಲವಾಗಿ ಗಮನಿಸಬೇಕಾದ ಪ್ರಮುಖ ಪದಗಳು, ವಿಷಯಗಳು, ಜನರು ಮತ್ತು ಸ್ಥಳಗಳನ್ನು ಒದಗಿಸುವ ಮೂಲಕ ನೀವು ಪರೀಕ್ಷೆಗಳಿಗೆ ಸಿದ್ಧರಾಗಲು ಇವು ನಿಮಗೆ ಸಹಾಯ ಮಾಡುತ್ತವೆ.

ಆರು ಪರೀಕ್ಷೆಗಳು

ನಿಮ್ಮ ವೇಗಕ್ಕೆ ತಡೆಯೊಡ್ಡುವ ಬದಲು ನಿಮಗೆ ಸಹಾಯ ಒದಗಿಸಲು ರೂಪಿಸಲಾಗಿರುವ ಪ್ರತಿ ಪರೀಕ್ಷೆಯು, ಕಲಿಸಿರುವುದು ನಿಮಗೆ ಅರ್ಥವಾಗಿದೆ ಎಂದು ಖಚಿತಪಡಿಸಿಕೊಳ್ಳುವುದಕ್ಕಾಗಿ ನಿಗದಿತ ಓದುವಿಕೆಯ ಭಾಗದಿಂದ ತೆಗೆದುಕೊಳ್ಳಲಾದ ಐವತ್ತು ಪ್ರಶ್ನೆಗಳನ್ನು ಹೊಂದಿರುತ್ತದೆ. ಕೊನೆಯ ಪರೀಕ್ಷೆಯು ಸಮಗ್ರ ಪರೀಕ್ಷೆಯಾಗಿರುತ್ತದೆ.

ರೀಡಿಂಗ್ ಪೇಸ್ ಗೈಡ್

ನಿಮ್ಮ ರೀಡಿಂಗ್ ಪೇಸ್ ಕೈಪಿಡಿಯ ಸಹಾಯದಿಂದ ನಿಮ್ಮ ಓದುವಿಕೆಯ ವೇಳಾಪಟ್ಟಿಗೆ ಅನುಗುಣವಾಗಿರಿ. ನೀವು ಕೋರ್ಸನ್ನು ಅಪೇಕ್ಷಿತ ಸಮಯಾವಧಿಯಲ್ಲಿ ಮುಗಿಸಲು ಪ್ರತಿ ದಿನ ಯಾವ ಪುಟಗಳನ್ನು ಓದಬೇಕು ಎಂದು ಈ ಕೈಪಿಡಿಯು ತಿಳಿಸುತ್ತದೆ.