ಕೊಲೊಸ್ಸೆಯವರಿಗೆ ಮತ್ತು ಫಿಲೆಮೋನನಿಗೆ
ಕೊಲೊಸ್ಸೆಯವರಿಗೆ ಬರೆದ ಪುಸ್ತಕವು ಒಂದು ಸಂಘಟಿತ ಹಾಗೂ ವೈವಿಧ್ಯತೆಯುಳ್ಳ ಸಮಾಜಕ್ಕಾಗಿ ಪ್ರಾಮುಖ್ಯವಾಗಿರುವ ಬೋಧನೆಗಳನ್ನೊಳಗೊಂಡಿರುತ್ತದೆ. ಕೊಲೊಸ್ಸೆಯಲ್ಲಿನ ಸಭೆಯು ಬೆಳೆಯುವದಕ್ಕಾರಂಭಿಸಿದ ಹಾಗೆ, ಸದಸ್ಯರು ಕ್ರೈಸ್ತರಾಗಿ ತಮಗಿರುವ ಗುರುತಿನ ಮತ್ತು ದೇವರೊಂದಿಗಿನ ತನ್ನ ಸಂಬಂಧದ ವಿಷಯದಲ್ಲಿ ಸವಾಲುಗಳನ್ನು ಎದುರಿಸುವವರಾದರು. ಪೌಲನು ಕೊಲೊಸ್ಸೆಯವರಿಗೆ ಮತ್ತು ಫಿಲೆಮೋನನಿಗೆ ಬರೆದ ಪತ್ರಿಕೆಗಳು ದೈವಶಾಸ್ತ್ರೀಕ ಸತ್ಯಗಳು ಹಾಗೂ ಕಾರ್ಯತಃ ವಿವಾದಾಂಶಗಳ ಕುರಿತಾಗಿ ಮಾತಾಡುತ್ತವೆ. ಈ ವಿಷಯಗಳು ಕಾಲಾತೀತವಾದವುಗಳಾಗಿವೆ, ಮತ್ತು ಈ ಪುಸ್ತಕಗಳನ್ನು ಜಾಗರೂಕವಾಗಿ ಅಧ್ಯಯನ ಮಾಡುವದು ಒಂದು ಜೀವಿತ-ಬದಲಾಯಿಸುವ ಅನುಭವವಾಗುವದು.