ಗಲಾತ್ಯದವರಿಗೆ
ಅನ್ಯಜನರಿಗೋಸ್ಕರ ಅಪೊಸ್ತಲನಾಗಿ, ಪೌಲನು ಗಲಾತ್ಯದ ರೋಮನ್ ಪ್ರಾಂತ್ಯದಲ್ಲಿ ತಾನು ಸ್ಥಾಪಿಸಿದ್ದ ಹೊಸದಾದ ಸಭೆಗಳನ್ನು, ಅವರ ನಂಬಿಕೆಯನ್ನು ನಾಶಗೊಳಿಸುವ ವ್ಯಕ್ತಿಗಳಾದಂತಹ ಯೆಹೂದಿಕರಣಗೊಳಿಸುವವರಿಂದ ಕಾಪಾಡುವದಕ್ಕೆ ಪ್ರಯತ್ನಿಸಿದನು. ಆತನು ನೀತಿವಂತರೆಂಬ ನಿರ್ಣಯಕ್ಕೆ ಆಧಾರವಾಗಿ ಧರ್ಮಶಾಸ್ತ್ರದಲ್ಲಿರುವ ಕೊರತೆಗಳನ್ನು ಬಯಲಿಗೆ ತರುತ್ತಾನೆ, ಅದೇ ವೇಳೆಯಲ್ಲಿ ಯೇಸು ಕ್ರಿಸ್ತನ ಯಜ್ಞವನ್ನು ಉನ್ನತಕ್ಕೇರಿಸುತ್ತಾನೆ.