ಪ್ರಕಟಣೆ 12—22
ಪ್ರಕಟನೆ ಪುಸ್ತಕ, ಸುಸ್ಪಷ್ಟವಾದ ಚಿತ್ರಣ ಮತ್ತು ಅತ್ಯಂಥ ರೂಪಕವಾದ ಸಾಂಕೇತಿಕಯನ್ನು ಒಳಗೊಂಡಿದ್ದು, ಅತ್ಯುತ್ತಮ ಕ್ರೈಸ್ತೀಯ ಪಂಡಿತನಿಗೆ ಸಹ ಅರ್ಥನಿರೂಪಣೆಯ ಸವಾಲುಗಳನ್ನು ಮುಂದಿಡುತ್ತದೆ. ಹೇಗೂ, ಡೇವಿಡ ಎಲ್. ರೋಪರ್ ಈ ಪುಸ್ತಕದ ಮೇಲೆ ಬರೆದಿರುವ ಎರಡು ಸಂಪುಟಗಳಲ್ಲಿ ಅತಿ ಸಹಾಯಕರ ಹಾಗೂ ಸರಳವಾಗಿ ಅರ್ಥವಾಗುವಂತಹ ಅಧ್ಯಯನಗಳಲ್ಲೊಂದನ್ನು ಮುಂದಿಡುತ್ತಾನೆ. ಈ ಕೋರ್ಸನಲ್ಲಿ, ಆತನು 12 ರಿಂದ 22 ಅಧ್ಯಾಯಗಳನ್ನಾಧರಿಸಿ ವಾಚಕನನ್ನು ಸೈತಾನನ ಅಂತಿಮ ಸೋಲಿನ ಕುರಿತು ಸಂಭ್ರಮಿಸುವಂತೆ ನಡಿಸುವ ರೋಮಾಂಚಕಾರಿ ಅಧ್ಯಯನಕ್ಕೆ ನಡಿಸುತ್ತಾನೆ.
ರೋಪರ್.ನು ಯುದ್ಧಗಳು, ಮೃಗಗಳು, ಮತ್ತು ರೌದ್ರದ ಪಾತ್ರೆಗಳ ಸುತ್ತ ಇರುವ ಮರ್ಮವನ್ನು ಬಯಲುಗೊಳಿಸುತ್ತಾನೆ. ಯುಗಾಂತ್ಯದ ಕುರಿತು ಆತನು ನೀಡುವ ವ್ಯಾಖ್ಯೆಗಳು ಅರ್ಮಗೆದ್ದೋನ್ ಮತ್ತು ಕ್ರಿಸ್ತನ ಆಳ್ವಿಕೆ ಕುರಿತು ಗೊಂದಲಕರ ಊಹೆಗಳನ್ನು ಸ್ಪಷ್ಟಗೊಳಿಸಿ, ವಾಚಕನಿಗೆ ತನ್ನ ಮುಖ್ಯ ಗಮನವನ್ನು ಪ್ರಕಟನೆ ಪುಸ್ತಕದ ನಿಜವಾದ ಸಂದೇಶದ – ಕ್ರೈಸ್ತ ಜಯ- ಕಡೆಗೆ ಹರಿಸುವಂತೆ ಅವಕಾಶವನ್ನು ಒದಗಿಸುತ್ತಾನೆ. ಆತನು ಯೋಹಾನನಿಗೆ ಸಂಬಂಧಿಸಿದ ಅತ್ಯಾಶ್ಚರ್ಯ ವಾದ ವಾಗ್ದಾನವನ್ನು ಸ್ಷಷ್ಟವಾಗಿ ತಿಳಿಯಪಡಿಸುತ್ತಾನೆ: ಸಾಯಬೇಕಾದರೂ ನಂಬಿಗಸ್ತನಾಗಿ ಉಳಿಯುವವನು ನಿತ್ಯಜೀವದಿಂದ ಆಶೀರ್ವದಿಸಲ್ಪಡುವನು.