ಕ್ರಿಸ್ತನ ಜೀವನ, 1

ಸುವಾರ್ತೆಗಳಲ್ಲಿ ಬರೆಯಲ್ಪಟ್ಟಿರುವದನ್ನು ಓದುವಾಗ ಪ್ರತಿಯೊಬ್ಬ ಕ್ರೈಸ್ತನು ಸಹ ರೋಮಾಂಚನಗೊಳ್ಳಬೇಕು. ಯೇಸುವಿನ ಜೀವನದ ಘಟನೆಗಳನ್ನು ಅವುಗಳ ನಡೆದ ಕಾಲಘಟ್ಟದಲ್ಲಿ ವಿವರಿಸುವವನಾಗಿ, ಡೇವಿಡ್ ಎಲ್. ರೋಪರ್ ನಮ್ಮನ್ನು ಒಂದು ಕಲಿಕಾ ಅನುಭವಕ್ಕೆ ಕರೆದೊಯ್ದು ಯೇಸುವಿನ ಜೀವನದಲ್ಲಿ ನಡೆದ, ಆತನ ಮಾತುಗಳು, ಸಂಭಾಷಣೆಗಳು, ಮತ್ತು ಕ್ರಿಯೆಗಳೂ ಸೇರಿದಂತೆ ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಮುಂದಿಡುತ್ತಾರೆ, ಅಲ್ಲದೆ ವಾಚಕನು ಅವುಗಳನ್ನು ಜೀವಿತಕ್ಕೆ ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಾರೆ. ರೋಪರ್ ನಮಗೆ ಪ್ಯಾಲೆಸ್ಟೈನ್ ಭೌಗೋಲಿಕತೆ, ಅದರ ಜನರ ಪದ್ಧತಿ ಹಾಗೂ ಸಂಪ್ರದಾಯಗಳನ್ನು ಮತ್ತು ಯೇಸುವನ್ನು ಸುತ್ತುವರೆದಿದ್ದ ವಿವಿಧ ಜನರ ಗುಂಪುಗಳ ನುಡಿ ಚಿತ್ರಗಳನ್ನು ವಿವರಿಸುವ ಮೂಲಕ ಕ್ರಿಸ್ತನ ಜೀವನ ನಮ್ಮ ಹೃದಯಗಳಲ್ಲಿ ಉರಿಯುವಂತೆ ಮಾಡುತ್ತಾರೆ. ಈ ಕೋರ್ಸ್ ನಮಗೆ ಯೇಸು ತಂದೆಯಿಂದ ತೆಗೆದುಕೊಂಡ ಬಂದ ಸಂದೇಶವನ್ನು ಮಾತ್ರವೇ ನಮ್ಮ ಮುಂದೆ ತರುವದಿಲ್ಲ, ಆದರೆ ಆತನ ಜೀವಿತದ ವಾತಾವರಣವನ್ನು ರೂಪಿಸಿದಂಥ ಶಬ್ಧಗಳು ಹಾಗೂ ದೃಶ್ಯಗಳನ್ನು, ದೂಳು ಮತ್ತು ಜೀವನದ ಪರಿಸ್ಥಿತಿಗಳನ್ನು, ಹಗಲು ಹಾಗೂ ರಾತ್ರಿಗಳನ್ನು ಸಹ ನಮ್ಮ ಕಣ್ಣುಗಳ ಮುಂದೆ ತಂದು ನಿಲ್ಲಿಸುತ್ತದೆ. ಈ ಕೋರ್ಸ್ ನ ಪಠ್ಯವನ್ನು ಜಾಗ್ರತೆಯಿಂದ ಓದುವ ಯಾವನೂ ಸಹ ನಂತರ ಮುಂಚೆ ಇದ್ದ ವ್ಯಕ್ತಿಯಾಗಿ ಉಳಿಯುವದಿಲ್ಲ. ಯೇಸುವಿನೊಂದಿಗೆ ನಡೆದಾಡಿ, ಆತನ ಉಪದೇಶಗಳನ್ನು ಆಲಿಸಿ, ಆತನು ತನ್ನ ಕಾಳದ ಜನರೊಂದಿಗೆ ಸಂಭಾಷಿಸುವದನ್ನು ನೋಡಿ, ಆತನ ಮರಣ ಹಾಗೂ ಪುನರುತ್ಥಾನಕ್ಕೆ ಸಾಕ್ಷಿಯಾದ ಬಳಿಕವೂ ಯಾರಾದರೂ ಮಾರ್ಪಡದೆ ಇರುವದಕ್ಕೆ ಸಾಧ್ಯವೋ!


ಕೋರ್ಸಿನಲ್ಲಿ ಏನೇನಿರುತ್ತದೆ?

ಈ 50-ದಿನಗಳ ಕೋರ್ಸಿನಲ್ಲಿ ನಿಮಗೆ ಬೇಕಾದುದೆಲ್ಲವೂ ಇರುತ್ತದೆ. ಈ ಕೋರ್ಸನ್ನು ಮುಗಿಸಲು ನಿಮಗೆ ಹೆಚ್ಚಿನ ಸಮಯದ ಆವಶ್ಯಕತೆಯಿದ್ದಲ್ಲಿ, ನಿಮ್ಮ ಕೋರ್ಸನ್ನು ಹೆಚ್ಚುವರಿ 30 ದಿನಗಳಿಗಾಗಿ ವಿಸ್ತರಿಸಬಹುದು. ಕೆಲವು ಮಾದರಿ ಪಠ್ಯ ಸಾಮಗ್ರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್ ಪುಸ್ತಕ

ಕ್ರಿಸ್ತನ ಜೀವನ, 1 ರವರು ಬರೆದಿರುವ ಡೇವಿಡ್ ಎಲ್. ರೋಪರ ಪುಸ್ತಕದ ಡಿಜಿಟಲ್ ಪ್ರತಿಯು ಕೋರ್ಸಿನ ನಿಮ್ಮ ಅಧ್ಯಾಪಕರಾಗಿರುತ್ತಾರೆ, ಮತ್ತು ಕೋರ್ಸ್ ಮುಗಿದ ಬಳಿಕವೂ ಅದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು.

ಐದು ಅಧ್ಯಯನ ಗೈಡ್ ಗಳು

ನೀವು ಓದುವಾಗ ಸ್ಥೂಲವಾಗಿ ಗಮನಿಸಬೇಕಾದ ಪ್ರಮುಖ ಪದಗಳು, ವಿಷಯಗಳು, ಜನರು ಮತ್ತು ಸ್ಥಳಗಳನ್ನು ಒದಗಿಸುವ ಮೂಲಕ ನೀವು ಪರೀಕ್ಷೆಗಳಿಗೆ ಸಿದ್ಧರಾಗಲು ಇವು ನಿಮಗೆ ಸಹಾಯ ಮಾಡುತ್ತವೆ.

ಆರು ಪರೀಕ್ಷೆಗಳು

ನಿಮ್ಮ ವೇಗಕ್ಕೆ ತಡೆಯೊಡ್ಡುವ ಬದಲು ನಿಮಗೆ ಸಹಾಯ ಒದಗಿಸಲು ರೂಪಿಸಲಾಗಿರುವ ಪ್ರತಿ ಪರೀಕ್ಷೆಯು, ಕಲಿಸಿರುವುದು ನಿಮಗೆ ಅರ್ಥವಾಗಿದೆ ಎಂದು ಖಚಿತಪಡಿಸಿಕೊಳ್ಳುವುದಕ್ಕಾಗಿ ನಿಗದಿತ ಓದುವಿಕೆಯ ಭಾಗದಿಂದ ತೆಗೆದುಕೊಳ್ಳಲಾದ ಐವತ್ತು ಪ್ರಶ್ನೆಗಳನ್ನು ಹೊಂದಿರುತ್ತದೆ. ಕೊನೆಯ ಪರೀಕ್ಷೆಯು ಸಮಗ್ರ ಪರೀಕ್ಷೆಯಾಗಿರುತ್ತದೆ.

ರೀಡಿಂಗ್ ಪೇಸ್ ಗೈಡ್

ನಿಮ್ಮ ರೀಡಿಂಗ್ ಪೇಸ್ ಕೈಪಿಡಿಯ ಸಹಾಯದಿಂದ ನಿಮ್ಮ ಓದುವಿಕೆಯ ವೇಳಾಪಟ್ಟಿಗೆ ಅನುಗುಣವಾಗಿರಿ. ನೀವು ಕೋರ್ಸನ್ನು ಅಪೇಕ್ಷಿತ ಸಮಯಾವಧಿಯಲ್ಲಿ ಮುಗಿಸಲು ಪ್ರತಿ ದಿನ ಯಾವ ಪುಟಗಳನ್ನು ಓದಬೇಕು ಎಂದು ಈ ಕೈಪಿಡಿಯು ತಿಳಿಸುತ್ತದೆ.

ಅಧ್ಯಯನ ನೆರವು

ಕೋರ್ಸಿನಲ್ಲಿ ನಿಮ್ಮ ಕಲಿಕೆಗೆ ಪೂರಕವಾದ ಹೆಚ್ಚುವರಿ ಅಧ್ಯಯನ ಸಾಮಗ್ರಿಗಳು ಈ ಕೋರ್ಸಿನಲ್ಲಿ ಲಭ್ಯವಿವೆ.