ಸೆಮಿಸ್ಟರ್ ಅಧ್ಯಯನಗಳು
ಸಂಪೂರ್ಣ ಪವಿತ್ರ ಬೈಬಲ್‍ನ ಮಾರ್ಗದರ್ಶನಯುಕ್ತ ಅಧ್ಯಯನ
ಹೊಸ ಒಡಂಬಡಿಕೆಯ ಆರಂಭದಿಂದ ಶುರುಮಾಡಿ ಇಡಿ ಬೈಬಲ್ ನ ಶೈಕ್ಷಣಿಕ ಯಾತ್ರೆಯ ಅನುಭವ ಪಡೆಯಿರಿ. ನೀವು ಮೊದಲ ಬಾರಿಯ ಬೈಬಲ್ ಓದುಗರಾಗಿರಬಹುದು ಅಥವಾ ಅನುಭವಸ್ಥ ಓದುಗರಾಗಿರಬಹುದು, ಆದರೆ ದಿ ತ್ರೂ ದ ಸ್ಕ್ರಿಪ್ಚರ್ಸ್ ಆನ್ಲೈನ್ ಶಾಲೆಯು, ಬೈಬಲ್ ಅಧ್ಯಯನಕ್ಕೆ ಅತ್ಯುತ್ತಮ ವೇದಿಕೆಯಾಗಿದೆ. ಪ್ರತಿಯೊಂದು ವಾಕ್ಯದ ಚಾರಿತ್ರಿಕ ಹಿನ್ನೆಲೆ, ಸಂದರ್ಭ ಮತ್ತು ಇನ್ನೂ ಹಲವು ಸಂಗತಿಗಳ ಅರಿವನ್ನು ನೀಡುವ ಮೂಲಕ ನಮ್ಮ ಕೋರ್ಸುಗಳು ಬೈಬಲ್ಲಿನ ಪ್ರತಿ ಪುಸ್ತಕವನ್ನು ಆಳವಾಗಿ ಅಭ್ಯಸಿಸಲು ಸಹಾಯ ಮಾಡುತ್ತದೆ. ಒಮ್ಮೆ ಒಂದು ಕೋರ್ಸನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ ಥ್ರೂ ದ ಸ್ಕ್ರಿಪ್ಚರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಒಂದು ಕೋರ್ಸನ್ನು ನೀವು ಪೂರ್ತಿಗೊಳಿಸಿದ ನಂತರ, ನಿಮಗೆ ಇನ್ನೊಂದು ಕೋರ್ಸಿಗೆ ಹೋಗಬಹುದು, ಮತ್ತು ಮುಂದುವರಿಯುತ್ತಾ ಹೋದಂತೆ ಪ್ರತಿ ಕೋರ್ಸಿಗೆ ನೀವು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.
ನಿಮ್ಮದೇ ವೇಗದಲ್ಲಿ ಕಲಿಯಿರಿ
Through the Scriptures ಆನ್‍ಲೈನ್ ಶಾಲೆಯು ನಿಮ್ಮದೇ ವೇಗದಲ್ಲಿ ಕಲಿಯಲು ಅನುವು ಮಾಡಿಕೊಡುವುದರ ಜೊತೆಗೆ ಕಲಿಕೆಗೆ ಒಂದು ರಚನಾತ್ಮಕ ಚೌಕಟ್ಟನ್ನು ಒದಗಿಸುತ್ತದೆ. ಕಲಿಕೆಯ ಎಲ್ಲ ಹಂತಗಳಿಗೂ ಇದು ಪ್ರಶಸ್ತವಾಗಿದೆ!
ನಿಮ್ಮ ಪ್ರಗತಿಯನ್ನು ನೋಡಿ
ಪ್ರತಿ ತರಗತಿಯ ಪೂರ್ತಿಗೊಳಿಸುವಿಕೆಯೊಂದಿಗೆ ನಿಮ್ಮ ಟ್ರಾನ್ಸ್ ಕ್ರಿಪ್ಟ್ ಮುಂದುವರಿದಂತೆಲ್ಲಾ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಕಾಣುವಿರಿ. ನಿರ್ದಿಷ್ಟ ಗುಂಪಿನ ಕೋರ್ಸುಗಳನ್ನು ಒಮ್ಮೆ ನೀವು ಪೂರ್ತಿಗೊಳಿಸಿದ ಬಳಿಕ, ನಿಮ್ಮ ಸಾಧನೆಗಾಗಿ ನಿಮಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಕೋರ್ಸ್‍ನಲ್ಲಿ ಏನೇನಿರುತ್ತದೆ?
ಪ್ರತಿ ಕೋರ್ಸಿನಲ್ಲಿ ನಿಮಗೆ ಬೇಕಾದುದೆಲ್ಲವೂ ಇರುತ್ತದೆ. ಅತ್ಯಮೂಲ್ಯ ಡಿಜಿಟಲ್ ಪಠ್ಯಪುಸ್ತಕ ಒಳಗೊಂಡಂತೆ, ಡೌನ್ ಲೋಡ್ ಮಾಡಿದ ಪಠ್ಯ ಸಾಮಗ್ರಿಗಳನ್ನು ಕೋರ್ಸ್ ಮುಗಿದ ಬಳಿಕ ನೀವು ನಿಮ್ಮೊಂದಿಗೆ ಇರಿಸಿಕೊಳ್ಳಬಹುದು.
ಅನುಭವಸ್ಥ ಪ್ರೊಫೆಸರುಗಳು ಮತ್ತು ಪರಿಣತರು ಬರೆದ ಡಿಜಿಟಲ್ ಪಠ್ಯಪುಸ್ತಕ
ಪ್ರಮುಖ ಪರಿಕಲ್ಪನೆಗಳನ್ನು ಗುರುತಿಸಲು ನೆರವಾಗುವ 5 ಅಧ್ಯಯನ ಗೈಡ್ ಗಳು
ಯಶಸ್ವಿ ಓದುವಿಕೆಯನ್ನು ಖಚಿತಪಡಿಸಲು 6 ಪರೀಕ್ಷೆಗಳು
ನೀವು ಜಾಡು ತಪ್ಪದಂತೆ ನೆರವಾಗಲು ರೀಡಿಂಗ್ ಪೇಸ್ ಗೈಡ್ ಇದೆ
ನಕ್ಷೆ, ಚಾರ್ಟ್, ವೀಡಿಯೋ ಮತ್ತು ಇನ್ನೂ ಹೆಚ್ಚಿನ ಪೂರಕ ಸಾಮಗ್ರಿಗಳು
ಶಾಲೆಯಲ್ಲಿ ಯಾವ ಕೋರ್ಸ್‍ಗಳಿವೆ?
ನಿಮ್ಮ ಮೊದಲನೆಯ ಕೋರ್ಸ್ "ಯೇಸು ಕ್ರಿಸ್ತನ ಜೀವನ, 1" ಆಗಿರುತ್ತದೆ. "ಯೇಸು ಕ್ರಿಸ್ತನ ಜೀವನ, 1" ಪೂರ್ತಿಗೊಳಿಸಿದ ಬಳಿಕ, ನೀವು ಎರಡನೆಯ ಕೋರ್ಸ್, "ಯೇಸು ಕ್ರಿಸ್ತನ ಜೀವನ, 2" ಅನ್ನು ಖರೀದಿಸುವಿರಿ. ನೀವು ಪ್ರತಿ ಕೋರ್ಸನ್ನು ಪೂರ್ತಿಗೊಳಿಸಿದ ಬಳಿಕ, ನಿಮಗೆ ಮುಂದಿನ ಕೋರ್ಸ್ ಅನ್ನು ಪ್ರಸ್ತುತಪಡಿಸಲಾಗುವುದು ಮತ್ತು ನೀವು ಮುಂದುವರಿಯುತ್ತಾ, ಪ್ರತಿ ಕೋರ್ಸ್‍ಗಾಗಿ ಪ್ರತ್ಯೇಕವಾಗಿ ಪಾವತಿಸುತ್ತಾ ಹೋಗುವಿರಿ. ನೀವು ಅಭ್ಯಸಿಸುವ ಎಲ್ಲಾ ಕೋರ್ಸುಗಳನ್ನು , ನೀವು ಅವುಗಳನ್ನು ತೆಗೆದುಕೊಳ್ಳುವ ಕ್ರಮಾನುಗತಿಯಲ್ಲಿ ಕೆಳಗೆ ಪಟ್ಟಿಮಾಡಲಾಗಿದೆ.
ಕೋರ್ಸ್‍ಗಳ ನಿರ್ದಿಷ್ಟ ಗುಂಪುಗಳನ್ನು ಪೂರ್ತಿಗೊಳಿಸಿದ ಬಳಿಕ ನಿಮಗೆ ಸಾಧನೆಯ ಪ್ರಮಾಣಪತ್ರಗಳನ್ನು ನೀಡಲಾಗುವುದು. ಈ ಗುಂಪುಗಳನ್ನು ಬಣ್ಣಗಳ ಮೂಲಕ ಕೆಳಗೆ ಪ್ರತಿನಿಧಿಸಲಾಗಿದೆ.